Friday, September 10, 2010

ಗಣಪತಿ ಹಬ್ಬದ ನೆನಪುಗಳು

ಗಣಪತಿ ಹಬ್ಬವೆಂದರೆ ನಮ್ಮ ಮನೆಯಲ್ಲಿ ಮೂರು ನಾಲ್ಕು ದಿನಗಳಿಂದಲೇ ಸಡಗರ. ಅಮ್ಮನ ಹುಮ್ಮಸ್ಸು ಆಕಾಶಕ್ಕೆ ಮುಟ್ಟಿರತ್ತೆ ! ನಿನ್ನೆ, ಗಾಂಧೀ ಬಜಾರ್ ವಧುವಿನಂತೆ ಸಿಂಗಾರಗೊಂಡಿತ್ತು. ಆಹಾ ! ಆ ಜನಜಂಗುಳಿ, ಆ ಹೂವುಗಳ ಘಮ, ಆ ಮಾತುಗಳ ಕಲರವ, ಧನ್ಯೋಸ್ಮಿ ! ಈ ವರ್ಷ ಗೌರಿ ಮತ್ತು ಗಣೇಶ ಒಂದೇ ದಿವಸ ಬಂದಿರುವುದರಿಂದ, ಅಮ್ಮನ ಉತ್ಸಾಹ ದುಪ್ಪಟ್ಟಾಗಿದೆ !  ಅಮ್ಮ ನಾಲ್ಕು ಗಂಟೆಗೆ ಎದ್ದು ಎಲ್ಲರನ್ನೂ ಎಬ್ಬಿಸಿ, ಹಬ್ಬಕ್ಕೆ ಅಣಿ ಮಾಡಿ ಗೌರಿ ಹಬ್ಬಕ್ಕೆ ಶ್ರೀಲಕ್ಷ್ಮಿಯನ್ನೂ ಕರೆದುಕೊಂಡು ಹೋಗಿದ್ದಾಳೆ.  ನಂತರ ಗಣಪತಿ ಪೂಜೆ. ಈ ವರ್ಷ ನಾನು, ಅಪ್ಪ ಇಬ್ಬರೇ :-(
ಶ್ರದ್ಧೆಯಿಂದ ಪೂಜೆ ಮಾಡದೆ ಅಜ್ಜನ ಹತ್ತಿರ ಗದರಿಸಿಕೊಳ್ಳುವುದೇ ಒಂದು ಮಜಾ ! - ಪುಟ್ಟಣ್ಣ , ಜಯಂತು, ನಂದನ, ದೊಡ್ಡಪ್ಪ ಇದ್ದಿದ್ದರೆ ಆ ಮಜವೇ ಬೇರೆ ! -